ಮುಖ್ಯೋಪಾಧ್ಯಾಯರ ಸಂದೇಶ

team

ಆತ್ಮೀಯ ವಿದ್ಯಾರ್ಥಿ/ವಿದ್ಯಾರ್ಥಿನೀಯರೆ

ಜ್ಞಾನ ದಾಹಕ್ಕೆ ಒತ್ತು ನೀಡಿ, ಸಂಸ್ಕಾರ ಶಿಸ್ತು ಶಿಕ್ಷಣಕ್ಕೆ ಹೆಸರಾದ ನಮ್ಮ ಸಂಸ್ಥೆ ಬೆಂಗಳೂರು ಜಿಲ್ಲೆಯಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನಮ್ಮ ಶಿಕ್ಷಣ ಸಂಸ್ಥೆ 1963ರಲ್ಲಿ ಚಂದಾಪುರ [ಛತ್ರಖಾನೆ] ಸುತ್ತಮುತ್ತಅನ ಶೈಕ್ಷಣಿಕ ಕಾಳಜಿವುಳ್ಳ, ನಿಶ್ವಾರ್ಥತೆಯಿಂದ ಕೂಡಿದ ಸಮಾಜಮುಖಿ ಸೇವೆಯಲ್ಲಿ ತೊಡಗಿದ್ದ ಗಣ್ಯ ಮಹಾಶಯರಿಂದ ಆರಂಭವಾಗಿ ಅಂದಿನಿಂದ ಇಂದಿನವರೆಗೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿರುವ ನಮ್ಮ ಶಿಕ್ಷಣ ಸಂಸ್ಥೆಯು ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ದಗಂಗಾ ಮಠಾಧೀಶರಾದ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಮೃತ ಹಸ್ತದಿಂದ ಪ್ರಾರಂಭಗೊಂಡು, ಬೆಳ್ಳಿಹಬ್ಬ, ಸುವರ್ಣ ಮಹೋತ್ಸವಗಳನ್ನು ಆಚರಿಸಿಕೊಂಡು ಹೆಮ್ಮರವಾಗಿ ಬೆಳೆಯುತ್ತಿದೆ. ಪ್ರಸ್ತುತ ವರ್ಷಕ್ಕೆ 57 ವಸಂತಗಳನ್ನು ಕಂಡ ನಮ್ಮ ಕನ್ನಡ ಮಾಧ್ಯಮ ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದಲ್ಲದೆ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ತುಂಬುತ್ತಾ ಸಾಗುತ್ತಿದೆ.

ಹಿಂದಿನಿಂದ ಸೇವೆ ಸಲ್ಲಿಸಿರುವ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ ವರ್ಗದವರ ಮಾರ್ಗದರ್ಶನ ಹಾಗೂ ಪ್ರಸುತ್ತ ಸೇವೆ ಸಲ್ಲಿಸುತ್ತಿರುವ ಆಡಳಿತ ಮಂಡಳಿ, ಶಿಕ್ಷಕ ಸಿಬ್ಬಂದಿ ವರ್ಗ ಹಳೆಯ ವಿದ್ಯಾರ್ಥಿಗಳ ಮತ್ತು ಪೋಷಕರ ಸಹಕಾರದಿಂದ ಉತ್ತಮವಾದ ಶಿಕ್ಷಣ ನೀಡಲು ಸಂತೋಷವಾಗುತ್ತಿದೆ. ನಾನು ಒಬ್ಬ ಈ ಶಾಲೆಯ ವಿದ್ಯಾರ್ಥಿಯಾಗಿ, ಸಹಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವುದು ನನ್ನ ಸೌಭಾಗ್ಯ ನಮ್ಮ ಸಂಸ್ಥೆಯ ಘನತೆಯನ್ನು ಎತ್ತಿ ಹಿಡಿಯುವುದರ ಜೊತೆಗೆ ಹಿಮಾಲಯದಷ್ಟು ಎತ್ತರಕ್ಕೆ ಬೆಳೆಯಬೇಕೆಂದು ಆಶಿಸುತ್ತೇನೆ.


ಶ್ರೀ. ಆರ್. ಎಂ. ಮುನಿಯಲ್ಲಪ್ಪ
ಮುಖ್ಯೋಪಾಧ್ಯಾರು